25 ನೇ ಮಾರ್ಚ್, 2019
ನೀವು ನಿವೇಶನವನ್ನು ಖರೀದಿಸಲು ನಿರ್ಧರಿಸಿದ ನಂತರ, ನಿಮ್ಮ ಬಳಿ ಎಲ್ಲಾ ದಾಖಲೆಗಳಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇವುಗಳಿಲ್ಲದಿದ್ದಲ್ಲಿ, ನಿಮ್ಮ ಖರೀದಿಯು ವಿಳಂಬವಾಗುತ್ತದೆ.
ಅಗತ್ಯವಿರುವ ಹೆಚ್ಚಿನ ದಾಖಲೆಗಳನ್ನು ಕಾನೂನು ಮತ್ತು ವೈಯಕ್ತಿಕ ಎಂದು ಎರಡು ವಿಧಗಳಾಗಿ ವಿಂಗಡಿಸಬಹುದು.
ಕಾನೂನಾತ್ಮಕ ದಾಖಲೆಗಳು: ಈ ದಾಖಲೆಗಳು ಅತ್ಯಗತ್ಯವಾಗಿರುತ್ತವೆ, ಮತ್ತು ಇವುಗಳಲ್ಲಿ ಒಂದನ್ನು ಕಳೆದುಕೊಂಡರೂ ಸಹಾ ಖರೀದಿಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು.
ಅವುಗಳೆಂದರೆ:-
ಹಕ್ಕು ಪತ್ರ, ಮಾರಾಟ ಪತ್ರ ಅಥವಾ ಮದರ್ ಡೀಡ್: ಮಾರಾಟಗಾರರಿಂದ ತೆಗೆದುಕೊಳ್ಳಲಾಗಿರುವ
ಲ್ಯಾಂಡ್ ಕ್ಲಿಯರೆನ್ಸ್: ನೀವು ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಗೆ ಪರಿವರ್ತಿಸಲು ಬಯಸಿದ್ದಲ್ಲಿ
ಭೂಮಿಯನ್ನು ನೋಂದಾಯಿಸಿರುವ ಉಪ-ರಿಜಿಸ್ಟ್ರಾರ್ ಕಚೇರಿಯಿಂದ ಪಡೆಯಲಾಗಿರುವ ಋಣಭಾರ ಪ್ರಮಾಣಪತ್ರ:
ತಹಶೀಲ್ದಾರ್ ಅವರ ಕಚೇರಿಯಿಂದ ಪಡೆದ ರೆಕಾರ್ಡ್ ಆಫ್ ರೈಟ್ಸ್ (ROR) ಪ್ರಮಾಣಪತ್ರ:
ಸಹಾಯಕ ಕಂದಾಯ ಅಧಿಕಾರಿಯಿಂದ ಪಡೆದ ಖಾತಾ ಪ್ರಮಾಣಪತ್ರ:
ವೈಯಕ್ತಿಕ ದಾಖಲೆಗಳು: ವೈಯಕ್ತಿಕ ದಾಖಲೆಗಳು ಕೇವಲ ಪರಿಶೀಲನೆಯ ಉದ್ದೇಶಗಳಿಗಾಗಿ ಮಾತ್ರ: ಆಧಾರ್, ಮತದಾರರ ಗುರುತಿನ ಚೀಟಿ ಮತ್ತು ಪ್ಯಾನ್ ಕಾರ್ಡ್.
ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು:
ಮಾರಾಟಗಾರನು ಮಾಲೀಕರಲ್ಲದಿದ್ದರೆ, ‘ಪವರ್ ಆಫ್ ಅಟಾರ್ನಿ’ ಡಾಕ್ಯುಮೆಂಟ್ ಅನ್ನು ಪರಿಶೀಲಿಸಬೇಕಾಗುತ್ತದೆ.
ಮಾರಾಟಗಾರನು ಉಲ್ಲೇಖಿಸಿರುವ ಅಳತೆಗಳು ನಿಖರವಾಗಿವೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ಸಮೀಕ್ಷಾ ಇಲಾಖೆಯಿಂದ ಭೂಮಿಯ ಸಮೀಕ್ಷೆಯ ರೇಖಾಚಿತ್ರವನ್ನು ಪಡೆಯಿರಿ.
ಒಂದಕ್ಕಿಂತ ಹೆಚ್ಚು ಮಾಲೀಕರು ಇದ್ದಲ್ಲಿ, ಎಲ್ಲಾ ಮಾಲೀಕರುಗಳಿಂದ ‘ಬಿಡುಗಡೆ ಪ್ರಮಾಣಪತ್ರ’ ಪಡೆಯುವುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ