ಅಸಮರ್ಪಕ ಕ್ಯೂರಿಂಗ್ ಮಾಡುವ ಮೂಲಕ ನಿಮ್ಮ ಮನೆಗೆ ನೀವು ಬಿರುಕುಗಳನ್ನು ಆಹ್ವಾನಿಸುತ್ತಿದ್ದೀರಾ?

ಹೊಸದಾಗಿ ನಿರ್ಮಾಣವಾದ ಅವರ ಮನೆಯಲ್ಲಿ ಯಾರೂ ಕೂಡಾ ಬಿರುಕುಗಳನ್ನು ನೋಡಲು ಬಯಸುವುದಿಲ್ಲ. ಕಾಂಕ್ರೀಟ್ ಸಂಪೂರ್ಣವಾಗಿ ದೃಢವಾದ ನಂತರ ಸಾಮಾನ್ಯವಾಗಿ ಸೀಳು ಬಿಡುವಿಕೆಯು ಕಾಣಿಸಲು ಪ್ರಾರಂಭಿಸುತ್ತದೆ. ಆದಾಗ್ಯೂ, ಬಿರುಕುಗಳ ರಚನೆಯನ್ನು ತಪ್ಪಿಸಲು ಕಾಂಕ್ರೀಟ್ ಕ್ಯೂರಿಂಗ್ ನಿಮಗೆ ಸಹಾಯ ಮಾಡುತ್ತದೆ ಎನ್ನುವುದು ನಿಮಗೆ ತಿಳಿದಿದೆಯೇ? ಕ್ಯೂರಿಂಗ್ ಎಂದರೇನು ಮತ್ತು ಸೀಳು ಬಿಡುವುದನ್ನು ತಡೆಯಲು ನೀವು ಅದನ್ನು ಹೇಗೆ ಬಳಸಬಹುದು ಎನ್ನುವುದನ್ನು ನೋಡೋಣ

ಕ್ಯೂರಿಂಗ್ ಎಂದರೇನು?

ಕ್ಯೂರಿಂಗ್ ಎಂದರೆ ಕಾಂಕ್ರೀಟ್ ಹಾಕಿದ ನಂತರ ನಿಗದಿತ ಅವಧಿಯವರೆಗೂ ಕಾಂಕ್ರೀಟ್‌ನಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವ ಪ್ರಕ್ರಿಯೆಯಾಗಿರುತ್ತದೆ.

ಯಾವಾಗ ಪ್ರಾರಂಭಿಸಬೇಕು?

ಕಾಂಕ್ರೀಟ್ ಮೇಲ್ಬಾಗವು ನಡೆಯಲು ಆಗುವಷ್ಟು ಗಟ್ಟಿಯಾದ ತಕ್ಷಣ, ನೀವು ಕ್ಯೂರಿಂಗ್ ಅನ್ನು ಪ್ರಾರಂಭಿಸಬೇಕಾಗುತ್ತದೆ.

ಅದು ಹೇಗೆ ಸಹಾಯ ಮಾಡುತ್ತದೆ

ಕ್ಯೂರಿಂಗ್ ಪ್ರಕ್ರಿಯೆಯು ಕಾಂಕ್ರೀಟಿನ ಶಕ್ತಿ ಹಾಗೂ ಬಾಳಿಕೆಯನ್ನು ಅಭಿವೃದ್ಧಿಪಡಿಸುತ್ತದೆ.

What is Concrete Curing and Different Ways of Curing

ನೀರನ್ನು ಕಟ್ಟಿ ನಿಲ್ಲಿಸುವ ಮೂಲಕ ಸ್ಲ್ಯಾಬ್‌ಗಳ ಕ್ಯೂರಿಂಗ್ ಮಾಡುವುದು

15 ಮಿಮೀ ಎತ್ತರದ ಗಡಿಗಳುಳ್ಳ ಸಣ್ಣ ವಿಭಾಗಗಳನ್ನು ನಿರ್ಮಿಸಿ ಹಾಗೂ ಅವುಗಳನ್ನು ನೀರಿನಿಂದ ತುಂಬಿಸಿ. ಕಾಂಕ್ರೀಟ್ ನೀರನ್ನು ಹೀರಿಕೊಳ್ಳುತ್ತಿದ್ದಂತೆ ಅದನ್ನು ಪುನಃ ತುಂಬಿಸಿ.

ಪ್ಲಾಸ್ಟರ್ ಮಾಡಿದ ಮೇಲ್ಮೈಗೆ ಹಾಗೂ ಇಟ್ಟಿಗೆ ಗೋಡೆಗಳಿಗೆ ನೀರನ್ನು ಸಿಂಪಡಿಸುವುದು

ಕಾಂಕ್ರೀಟ್‌ನಲ್ಲಿ ಕ್ಯೂರಿಂಗ್‌ಗಾಗಿ ತೇವಾಂಶವಿದೆ ಎಂದು ಖಾತರಿಪಡಿಸಿಕೊಳ್ಳಲು ನಿಯಮಿತವಾಗಿ ಗೋಡೆಗಳ ಮೇಲೆ ನೀರನ್ನು ಸಿಂಪಡಿಸುತ್ತಿರಿ.

ಪ್ಲಾಸ್ಟರ್ ಮಾಡಿದ ಮೇಲ್ಮೈಗೆ ಹಾಗೂ ಇಟ್ಟಿಗೆ ಗೋಡೆಗಳಿಗೆ ನೀರನ್ನು ಸಿಂಪಡಿಸುವುದು

ಕಾಂಕ್ರೀಟ್‌ನಲ್ಲಿ ಕ್ಯೂರಿಂಗ್‌ಗಾಗಿ ತೇವಾಂಶವಿದೆ ಎಂದು ಖಾತರಿಪಡಿಸಿಕೊಳ್ಳಲು ನಿಯಮಿತವಾಗಿ ಗೋಡೆಗಳ ಮೇಲೆ ನೀರನ್ನು ಸಿಂಪಡಿಸುತ್ತಿರಿ.

ತೇವ ಹಿಡಿದಿಟ್ಟುಕೊಳ್ಳುವ ಕವರಿಂಗ್‌ ಉಪಯೋಗಿಸಿ, ಬೀಮ್‌ಗಳು ಮತ್ತು ಕಾಲಮ್‌ಗಳನ್ನು ಕ್ಯೂರಿಂಗ್ ಮಾಡುವುದು

ಲಂಬವಾದ ರಚನೆಗಳಲ್ಲಿ ತೇವಾಂಶವನ್ನು ಉಳಿಸಲು, ಅವುಗಳನ್ನು ಒದ್ದೆಯಾದ ಸೆಣಬಿನ ಅಥವಾ ಗೋಣಿ ಚೀಲಗಳಿಂದ ಮುಚ್ಚಿ. ತೇವಾಂಶವನ್ನು ಉಳಿಸುವ ಸಲುವಾಗಿ ಅವುಗಳ ಮೇಲೆ ನೀರನ್ನು ಸಿಂಪಡಿಸುತ್ತಾ ಇರಿ.

ನಿಮ್ಮ ಮನೆಯಲ್ಲಿ ಬಿರುಕುಗಳನ್ನು ತಪ್ಪಿಸಲು ನಿಮ್ಮ ಮನೆಯ ನಿರ್ಮಾಣದ ಸಮಯದಲ್ಲಿ ಕ್ಯೂರಿಂಗ್ ಕುರಿತು ಕೆಲವು ಸಲಹೆಗಳು ಇವು. ಅಂತಹ ಹೆಚ್ಚಿನ ಸಲಹೆಗಳಿಗಾಗಿ, www.ultratechcement.com ಗೆ ಭೇಟಿ ನೀಡಿ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ