ಹೊಸ ಕನ್‌ಸ್ಟ್ರಕ್ಷನ್‌ಗಾಗಿ ಆಂಟಿ ಟರ್ಮೈಟ್ ಟ್ರೀಟ್ಮೆಂಟ್

25 ನೇ ಜನವರಿ, 2019

ನಿಮ್ಮ ಮನೆಯಲ್ಲಿ ಇರುವ ಮರದ ನಿರ್ಮಿತಿಗಳನ್ನು ಗೆದ್ದಲುಗಳಿಂದ ರಕ್ಷಿಸಲು ಗೆದ್ದಲು ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಗೆದ್ದಲು-ವಿರೋಧಿ ಕ್ರಮಗಳನ್ನು ಮಾಡುವ ಸಮಯದಲ್ಲಿ, ಮನೆಯ ಅಡಿಭಾಗ ಹಾಗೂ ತಳಪಾಯದ ಸುತ್ತಮುತ್ತಲಿನ ಮಣ್ಣನ್ನು ಗೆದ್ದಲು-ವಿರೋಧಿ ರಾಸಾಯನಿಕ ಅಥವಾ ಕೀಟನಾಶಕದಿಂದ ಸಂಸ್ಕರಿಸಲಾಗುತ್ತದೆ. ಇದು ಅಸ್ತಿತ್ವದಲ್ಲಿರುವ ಗೆದ್ದಲಿನ ಗುಂಪುಗಳನ್ನು ತೊಡೆದುಹಾಕುತ್ತದೆ ಹಾಗೂ ನಂತರ ಪುನಃ ಅವುಗಳು ಗೂಡುಗಳನ್ನು ರಚಿಸುವುದನ್ನು ತಡೆಯುತ್ತದೆ. ನಿಮ್ಮ ಮನೆಯ ನಿರ್ಮಾಣದಲ್ಲಿ ಗೆದ್ದಲಿನ-ತಡೆಯು ಏಕೆ ಅವಶ್ಯಕವಾಗಿದೆ ಮತ್ತು ಅದನ್ನು ಹೇಗೆ ಮಾಡಬೇಕೆಂಬುದನ್ನು ನೋಡೋಣ.

ಗೆದ್ದಲಿನ ತಡೆಯು ಏತಕ್ಕಾಗಿ ಅತಿ ಮುಖ್ಯವಾಗಿದೆ:

ಗೆದ್ದಲುಗಳು ಮರದ ನಿರ್ಮಿತಿಗಳಿಗೆ ಅತ್ಯಂತ ಉಪದ್ರವಕಾರಿಯಾಗಿರುತ್ತವೆ. ಅವುಗಳು ನಿಮ್ಮ ಮನೆಯ ಒಳಗೆ ಬಂದಲ್ಲಿ, ಅವು ನಿಮ್ಮ ಪೀಠೋಪಕರಣಗಳು, ಜೋಡಿಸಿದ ವಸ್ತುಗಳು ಮತ್ತು ನಿಮ್ಮ ಮನೆಯ ಇತರ ಘಟಕಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತವೆ. ಗೆದ್ದಲು-ತಡೆಯನ್ನು ಪೂರ್ವ-ನಿರ್ಮಾಣ ಹಂತದಲ್ಲಿಯೇ ಮಾಡದಿದ್ದರೆ, ಅವುಗಳು ನಿಮ್ಮ ಮನೆಯ ಕೆಳ ಭಾಗದಲ್ಲಿ ಗೂಡುಗಳನ್ನು ರಚಿಸಬಹುದು, ಅದು ವರ್ಷಗಳು ಕಳೆದಂತೆ ಅತಿ ಹೆಚ್ಚಿನ ಹಾನಿಗೆ ಕಾರಣವಾಗಬಹುದು.

ISI ವಿಶಿಷ್ಟ ವಿವರಗಳ ಅಡಿಯಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ರವರು ಶಿಫಾರಸು ಮಾಡಿರುವ ಕೆಲವು ಗೆದ್ದಲು ನಿಯಂತ್ರಣ ರಾಸಾಯನಿಕಗಳನ್ನು ಇಲ್ಲಿ ನೀಡಲಾಗಿದೆ:

    ಕ್ಲೋರ್ಪೈರಿಫೋಸ್ (Clorpyrifos) 20% EC

    ಇಮಿಡಕ್ಲೋಪ್ರಿಡ್ (Imidacloprid) 30.5% SC

ನಿರ್ಮಾಣ-ಪೂರ್ವ ಮತ್ತು ನಿರ್ಮಾಣದ ನಂತರದ ಗೆದ್ದಲು ನಿಯಂತ್ರಣ ಕ್ರಮಗಳು:

ಮಣ್ಣಿಗೆ, ಅಡಿಪಾಯಕ್ಕೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಗೆದ್ದಲು ವಿರೋಧಿ ದ್ರವ ರಾಸಾಯನಿಕಗಳನ್ನು ಒಳ ಸೇರಿಸುವ ಮೂಲಕ ನಿರ್ಮಾಣ-ಪೂರ್ವ ಸಮಯದಲ್ಲಿ ಗೆದ್ದಲು ವಿರೋಧಿ ಸಂಸ್ಕರಣೆಯನ್ನು ಮಾಡಲಾಗುತ್ತದೆ. ನಿರ್ಮಾಣದ ನಂತರದ ಗೆದ್ದಲು ವಿರೋಧಿ ಚಿಕಿತ್ಸೆಗಾಗಿ, ಗೋಡೆಗಳ ಬದಿಗಳು ಮತ್ತು ಕೆಳಗಿನ ಪ್ರದೇಶಗಳಿಗೆ ಟರ್ಮಿಟಿಸೈಡ್ನೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಸುತ್ತಮುತ್ತಲಿನ ಮಣ್ಣನ್ನು ಅಗೆದು ಸಂಸ್ಕರಿಸಬೇಕಾಗುತ್ತದೆ, ಹೀಗಾಗಿ ಮನೆಯ ಉದ್ದಕ್ಕೂ ಒಂದು ಗೆದ್ದಲು ನಿರೋಧಕ ತಡೆಗೋಡೆ ಸೃಷ್ಟಿಯಾಗುತ್ತದೆ.

ಪರಿಣಾಮಕಾರಿ ಗೆದ್ದಲು ವಿರೋಧಿ ಟ್ರೀಟ್‌ಮೆಂಟ್‌ ವಿವಿಧ ಹಂತಗಳು ಇಲ್ಲಿವೆ:

ತಪಾಸಣೆ: ಗೆದ್ದಲು ನಿರೋಧಕ ರಾಸಾಯನಿಕಗಳನ್ನು ಉಪಯೋಗಿಸಿ ನೀವು ಸಂಸ್ಕರಣೆ ಮಾಡಬೇಕಾದ ಪ್ರದೇಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಗುರುತಿಸಿ

ನಿವೇಶನದ ತಯಾರಿ: ರಾಸಾಯನಿಕಗಳನ್ನು ಉಪಯೋಗಿಸುವ ಮೊದಲು ನಿರ್ಮಾಣ ಸ್ಥಳವನ್ನು ತೆರವುಗೊಳಿಸಿ ಮತ್ತು ಸಂಸ್ಕರಣೆಗಾಗಿ ಗುರುತುಪಡಿಸಿದ ಪ್ರದೇಶದಲ್ಲಿ ಯಾವುದೇ ಅಂತರು ಇಲ್ಲವೆಂದು ಖಚಿತಪಡಿಸಿಕೊಳ್ಳಿ.

ಬಳಸುವಿಕೆ: ನಿರ್ದಿಷ್ಟ ಪ್ರದೇಶಗಳಿಗೆ ನಿಗದಿತ ಡೋಸ್ ದರದಲ್ಲಿ ಗೆದ್ದಲುನಾಶಕವನ್ನು ಬಳಸಲಾಗುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಗೆದ್ದಲುಗಳ ವಿರೋಧಿ ಸಂಸ್ಕರಣೆಯನ್ನು ತಜ್ಞರ ಸಮ್ಮುಖದಲ್ಲಿ ಕೈಗೊಳ್ಳಲಾಗುತ್ತಿದೆ ಎನ್ನುವುದನ್ನು ಯಾವಾಗಲೂ ಖಚಿತಪಡಿಸಿಕೊಳ್ಳಿ. ಕುಡಿಯುವ ನೀರಿನ ಮೂಲಗಳ ಬಳಿ ಎಲ್ಲಿಯೂ ಕೂಡಾ ರಾಸಾಯನಿಕಗಳ ಬಳಕೆಯು ಆಗದಂತೆ ನೋಡಿಕೊಳ್ಳಿ.

ಈ ಕೆಳಗಿನ ಕಾರಣಗಳಿಂದಾಗಿ ಗೆದ್ದಲು-ವಿರೋಧಿ ಟ್ರೀಟ್‌ಮೆಂಟ್‌ ಅನ್ನು ಮಾಡಿಸುವುದು ಬಹಳ ಮುಖ್ಯವಾಗುತ್ತದೆ:

ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಹಾಗೂ ನಿಮ್ಮ ಮನೆಗೆ ತಕ್ಷಣದಲ್ಲಿಯೇ ರಕ್ಷಣೆಯನ್ನು ನೀಡುತ್ತದೆ

ಇದು ಮನೆಗಳನ್ನು ಅನೇಕ ವರ್ಷಗಳವರೆಗೆ ಗೆದ್ದಲುಗಳಿಂದ ಸಂರಕ್ಷಿಸುತ್ತದೆ

ದ್ರವರೂಪದ ಗೆದ್ದಲುನಾಶಕಗಳು ಸುಲಭವಾಗಿ ಕೈಗೆಟುಕುವಂತವುಗಳು ಹಾಗೂ ಇದು ನಿಮ್ಮ ಮನೆಯ ಬಾಳಿಕೆಗೆ ಪ್ರಮುಖ ಹೂಡಿಕೆಯೆಂದು ಪರಿಗಣಿಸಬೇಕಾಗುತ್ತದೆ

ಗೆದ್ದಲುಗಳಿಂದ ನಿಮ್ಮ ಮನೆಗೆ ಆಗುವ ಹಾನಿಯನ್ನು ಬದಲಾಯಿಸಲು ಆಗುವುದಿಲ್ಲ. ಹಾಗಿದ್ದರೂ, ನಿಮ್ಮ ಮನೆಯು ಗೆದ್ದಲಿನಿಂದ-ಸುರಕ್ಷಿತವಾಗಿರಲು ಸ್ವಲ್ಪ ದೂರದೃಷ್ಟಿ ಮತ್ತು ಮುನ್ನೆಚ್ಚರಿಕೆಯು ನಿಮಗೆ ಬಹಳ ದಿನಗಳ ನೆಮ್ಮದಿಯನ್ನು ನೀಡುತ್ತದೆ.

 


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ