Stages of Building New Home Stages of Building New Home

ಹಂತ-ಹಂತವಾಗಿ ಮಾಡಬಹುದಾದ ವಾಟರ್ ಪ್ರೂಫಿಂಗ್‌ ಗೈಡ್

ನಿಮ್ಮ ಮನೆಯು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಇರುವ ಕೇವಲ ಒಂದು ಆಶ್ರಯತಾಣಕ್ಕೂ ಮೀರಿದ್ದಾಗಿರುತ್ತದೆ. ಇದು ನಿಮ್ಮ ಸುರಕ್ಷಿತ ತಾಣವಾಗಿರುತ್ತದೆ. ಇದು ಸೌಕರ್ಯ ನೀಡುವ ಮೃದುವಾದ ಕುಶನ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೊರಭಾಗದ ಅಂಶಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿಯೇ, ಮುಂದಿನ ಪೀಳಿಗೆಗೆ ಉಳಿಯುವಂತಹ ಮನೆಯನ್ನು ನಿರ್ಮಿಸಲು ನೀವು ಸಾಕಷ್ಟು ಸಮಯ, ಹಣ ಮತ್ತು ಶಕ್ತಿಯನ್ನು ಹೂಡಿಕೆ ಮಾಡಿರುತ್ತೀರಿ.

ಮತ್ತು ನೀವು ತುಂಬಾ ಕಾಳಜಿ ಹಾಗೂ ಗಮನವಿಟ್ಟು ನಿರ್ಮಿಸುವ ಮನೆಯು, ತೇವ ಅಥವಾ ಸ್ಲ್ಯಾಬ್ ಸೋರಿಕೆಯಿಂದಾಗಿ ತನ್ನ ಸೌಂದರ್ಯವನ್ನು ಕಳೆದುಕೊಳ್ಳಬಾರದು. ಏಕೆಂದರೆ ಇದು ನಿಮ್ಮ ಮನೆಯ ಬಾಳಿಕೆಯ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತದೆ ಮತ್ತು ಅದರ ಒಟ್ಟಾರೆ ಶಕ್ತಿಯನ್ನು ಕೂಡಾ ಕಡಿಮೆ ಮಾಡುತ್ತದೆ.
ತೇವವು ಏಕೆ ಉಂಟಾಗುತ್ತದೆ?
ತೇವವು ಏಕೆ ಉಂಟಾಗುತ್ತದೆ?

ತೇವ ಉಂಟಾಗಲು ಒಂದೇ ಒಂದು ಕಾರಣವಿರುವುದಿಲ್ಲ, ಆದರೆ ಮುನ್ನೆಚ್ಚರಿಕೆಯ ಒಂದು ಕೊರತೆಯು ಕೂಡಾ ಅದಕ್ಕೆ ಕಾರಣವಾಗಬಹುದು ಮತ್ತು ಅದು ನಿಮ್ಮ ರಚನೆಯ ಬಲದ ಮೇಲೆ ತೀವ್ರವಾದ ಪ್ರಭಾವ ಬೀರಲು ಕಾರಣವಾಗಬಹುದು. ತೇವ ಉಂಟಾಗಲು ಕೆಲವು ಪ್ರಮುಖ ಕಾರಣಗಳೆಂದರೆ:

1
ಗಾಳಿ ಬೆಳಕು ಸಾಲದೆ ಇರುವುದು
2
ಕೊಠಡಿಗಳಲ್ಲಿ ಸಾಕಷ್ಟು ತಾಪಮಾನ ಇಲ್ಲದೇ ಇರುವುದು
3
ಗೋಡೆಗಳಲ್ಲಿನ ಕಳಪೆ ಇನ್‌ಸುಲೇಶನ್
4
ಒದ್ದೆಯಾದ ಬಟ್ಟೆಗಳಂತಹ ನೀರಿನ ಮೂಲಗಳು,
ಗಿಡಗಳು, ಅಡುಗೆ ಮಾಡುವಿಕೆ ಮತ್ತು ಬಾತ್‌ರೂಮ್‌ಗಳು
5
ಬಿರುಕು ಬಿಟ್ಟ ಗೋಡೆಗಳು, ಸೋರುವ ಛಾವಣಿಗಳು ಮತ್ತು ಕಿಟಕಿಗಳ
ಮೂಲಕ ಮಳೆ ನೀರು ನುಗ್ಗುವಿಕೆ
6
ಗೋಡೆಗಳ ಮೇಲೆ ಹಾಗೂ ನೆಲದ ಮೂಲಕ ಬರುವ ತೇವ ಇದನ್ನು ಒದ್ದೆಯಾಗುವಿಕೆ
ಅಥವಾ ರೈಸಿಂಗ್‌ ಡ್ಯಾಂಪ್‌ನೆಸ್‌ ಎಂದೂ ಸಹ ಕರೆಯಲಾಗುವುದು
 
ಸ್ಲಾಬಿನ ಮೂಲಕ ಆಗುವ ಸೋರಿಕೆ ಅಂದರೆ ಯಾವುವು?

ಅಸಮರ್ಪಕವಾದ ಇಳಿಜಾರು ಅಥವಾ ಕಲ್ಮಶ ತುಂಬಿದ ಮಳೆ ನೀರಿನ ಕೊಳವೆಗಳಿಂದಾಗಿ ಛಾವಣಿಯ ಸ್ಲ್ಯಾಬ್ ಮೇಲೆ ಮಳೆ ನೀರು ಸಂಗ್ರಹವಾದಾಗ ಸ್ಲಾಬ್‌ನಲ್ಲಿ ಸೋರಿಕೆ ಸಂಭವಿಸುತ್ತದೆ. ಕಳಪೆ ಗುಣಮಟ್ಟದ ಕಾಂಕ್ರೀಟ್ ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕಾಲ ಕಳೆದಂತೆ, ಈ ನಿಶ್ಚಲವಾದ ನೀರು ಕಾಂಕ್ರೀಟ್‌ನ ಒಳಕ್ಕಿಳಿಯುತ್ತದೆ, ಹಾಗೂ ಇದರಿಂದಾಗಿ ಒಳಗೆ ಇರುವ ಕಬ್ಬಿಣದಲ್ಲಿ ತುಕ್ಕು ಉಂಟಾಗುತ್ತದೆ ಮತ್ತು ಒಳಭಾಗದಲ್ಲಿ ತೇವವು ಉಂಟಾಗುತ್ತದೆ. ಇದರ ಪರಿಣಾಮವಾಗಿ, ಇದು ಕಾಂಕ್ರೀಟ್‌ನ ವಿಘಟನೆಗೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು, ಸ್ಲ್ಯಾಬ್ ಹಾಕುವ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಮತ್ತು ಮಳೆ ನೀರಿನ ಕೊಳವೆಗಳ ಮೂಲಕ ನೀರು ಸರಿಯಾಗಿ ಹರಿದು ಹೋಗಲು ಅನುಕೂಲವಾಗುವಂತೆ ಸಾಕಷ್ಟು ಇಳಿಜಾರನ್ನು ನೀಡಿರಬೇಕು. ಯಾವುದೇ ಮನೆಯಲ್ಲಿ ಸ್ಲ್ಯಾಬ್ ಸೋರಿಕೆಯು ಸಂಭವಿಸಬಹುದು, ಅದಕ್ಕಾಗಿಯೇ ನಿಮ್ಮ ಮನೆಯನ್ನು ಜಲ ನಿರೋಧಕವಾಗಿ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಜಲನಿರೋಧಕತೆ ಎಂದರೇನು ಮತ್ತು
ಇದು ಏಕೆ ಮುಖ್ಯ?
ಜಲನಿರೋಧಕತೆ ಎಂದರೇನು ಮತ್ತು
ಇದು ಏಕೆ ಮುಖ್ಯ?

ದೀರ್ಘಾವಧಿಯಲ್ಲಿ ನೀರಿನ ಸೋರಿಕೆಯಾಗದಂತೆ ನಿಮ್ಮ ಮನೆಯನ್ನು ರಕ್ಷಿಸಲು ಉತ್ತಮ ಪರಿಹಾರವೆಂದರೆ ಜಲನಿರೋಧಕ ಪ್ರಕ್ರಿಯೆಯನ್ನು ಮಾಡುವುದು. ಕಾಂಕ್ರೀಟ್ ಜಲನಿರೋಧಕವು ಕಾಂಕ್ರೀಟ್ ಮೇಲೆ ಜಲನಿರೋಧಕ ವಸ್ತುಗಳನ್ನು ಉಪಯೋಗಿಸಿ ಲೇಪಿಸುವುದನ್ನು ಒಳಗೊಂಡಿರುತ್ತದೆ, ಅದು ನೀರು ಮತ್ತು ತೇವಾಂಶವು ಗೋಡೆಗಳು, ಮೇಲ್ಚಾವಣಿ, ಮಹಡಿಗಳು ಇತ್ಯಾದಿಗಳ ಮೂಲಕ ಹರಡದಂತೆ ತಡೆಯುತ್ತದೆ. ಜಲನಿರೋಧಕ ಪ್ರಕ್ರಿಯೆಯು ಏಕೆ ಮುಖ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳಲು, ನೀರಿನ ಸೋರಿಕೆ ನಿಜವಾಗಿಯೂ ಏಕೆ ಅನಪೇಕ್ಷಿತ ಎನ್ನುವುದನ್ನು ನೋಡಬೇಕಾಗುತ್ತದೆ:

ನೀರಿನ ಸೋರಿಕೆಯು ಕೇವಲ ಕಣ್ಣಿಗೆ ಕಾಣುವ ಸಮಸ್ಯೆಯಲ್ಲ. ಪರಿಶೀಲಿಸದೆ ಬಿಟ್ಟಲ್ಲಿ, ಅದು ಗೋಡೆಗಳ ಮೇಲೆ ಪಾಚಿಯನ್ನು ಉಂಟುಮಾಡಬಹುದು, ಹಾಗೂ ಅದು ನಿಮ್ಮ ಕುಟುಂಬದ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.
ಅಲ್ಲದೆ, ನೀರು ವಿದ್ಯುತ್ ತಂತಿಗಳನ್ನು ತಲುಪಿದಲ್ಲಿ, ಅದು ಶಾರ್ಟ್ ಸರ್ಕ್ಯೂಟ್ ಮತ್ತು ಬೆಂಕಿಗೆ ಕಾರಣವಾಗಬಹುದು. ತೇವಾಂಶವು ನಿಮ್ಮ ವೈಯಕ್ತಿಕ ವಸ್ತುಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಸಹ ಹಾಳುಮಾಡಬಹುದು.
ಅತ್ಯಂತ ಕೆಟ್ಟ ಸನ್ನಿವೇಶದಲ್ಲಿ, ನೀರಿನ ಸೋರಿಕೆಯು ಗೋಡೆಗಳು ಕೊಳೆಯುವುದು ಅಥವಾ ಅಡಿಪಾಯವು ಕೆಳಗೆ ಕುಸಿಯುವಂತಹ ಗಂಭೀರವಾದ ಕಟ್ಟಡ ಹಾನಿಯನ್ನು ಉಂಟುಮಾಡಬಹುದು. ಹಾಗೂ ಆ ರೀತಿಯಲ್ಲಿ ಆಗಿರಬಹುದಾದ ಹಾನಿಯನ್ನು ಸರಿಪಡಿಸುವುದು ಪರಿಶ್ರಮದಿಂದ ಕೂಡಿದ ಮತ್ತು ದುಬಾರಿಯ ವ್ಯವಹಾರವಾಗುತ್ತದೆ.
 

ಹಾಗಾಗಿ ಶುರುವಿನಿಂದಲೇ ತೇವದ ವಿರುದ್ಧವಾಗಿ ನಿಮ್ಮ ಮನೆಯನ್ನು
ರಕ್ಷಿಸಲು ಇದು ಉತ್ತಮವಾದ ಮಾರ್ಗ.

ವಾಟರ್‌ಪ್ರೂಫಿಂಗ್ ಅನ್ನು ಎಲ್ಲಿ ಮಾಡಬೇಕು?
ವಾಟರ್‌ಪ್ರೂಫಿಂಗ್ ಅನ್ನು ಎಲ್ಲಿ ಮಾಡಬೇಕು?

ನಿಮ್ಮ ಮನೆಯು ಪ್ರವಾಹಕ್ಕೆ ಗುರಿಯಾಗುವ ಪ್ರದೇಶಗಳಲ್ಲಿ ಅಥವಾ ನೀರಿನೊಂದಿಗೆ ಆಗಾಗ್ಗೆ ಸಂಪರ್ಕದಲ್ಲಿರುವ ಪ್ರದೇಶಗಳಲ್ಲಿ ಇದ್ದಲ್ಲಿ ಕಾಂಕ್ರೀಟ್ ವಾಟರ್ ಪ್ರೂಫಿಂಗ್ ಅತೀ ಮುಖ್ಯವಾಗಿರುತ್ತದೆ. ಇವುಗಳಲ್ಲಿ ಸ್ನಾನಗೃಹಗಳು ಮತ್ತು ಅಡಿಗೆಮನೆಗಳು ಅಥವಾ ವಾತಾವರಣಕ್ಕೆ ತೆರೆಯಲ್ಪಟ್ಟ ಪ್ರದೇಶಗಳು ಮೇಲ್ಛಾವಣಿ, ಬಾಲ್ಕನಿ, ಹೊರಗಿನ ಗೋಡೆಗಳು, ನೆಲಮಾಳಿಗೆ ಮತ್ತು ನೀರು ಸಂಗ್ರಹವಾಗಿರುವ ಪ್ರದೇಶಗಳು ಸೇರಿವೆ.

ವಾಟರ್ ಪ್ರೂಫಿಂಗ್ ಪರಿಹಾರಗಳ ವಿಧಗಳು

ಇಂದು ಅನೇಕ ರೀತಿಯ ವಾಟರ್ ಪ್ರೂಫಿಂಗ್ ವಿಧಾನಗಳು ಲಭ್ಯವಿವೆ. ನಿಮ್ಮ ಮನೆಗೆ ಬೇಕಾದ ಉತ್ತಮ ಪರಿಹಾರವನ್ನು ಕಂಡುಕೊಳ್ಳಲು ನಿಮ್ಮ ವಾಟರ್‌ಪ್ರೂಫಿಂಗ್‌ ಗುತ್ತಿಗೆದಾರರೊಂದಿಗೆ ಮಾತನಾಡಿ. ಒಂದು ಜನಪ್ರಿಯ ಪರಿಹಾರವೆಂದರೆ ಅಲ್ಟ್ರಾಟೆಕ್ ಸೀಲ್ & ಡ್ರೈ - ನಿಮ್ಮ ಮನೆಯ ವಿವಿಧ ಭಾಗಗಳಿಗಾಗಿ ವಿಶೇಷವಾಗಿ ರೂಪಿಸಲಾದ ವಾಟರ್ ಪ್ರೂಫಿಂಗ್ ಏಜೆಂಟ್‌ಗಳ ಒಂದು ಶ್ರೇಣಿ. ಅವುಗಳನ್ನು ಪ್ಲ್ಯಾಸ್ಟರ್, ಗಾರೆ ಮತ್ತು ಕಾಂಕ್ರೀಟ್‌ನ ಜಲ ನಿರೋಧಕ ಗುಣಲಕ್ಷಣಗಳನ್ನು ಸುಧಾರಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅದರ ಮೂಲಕ, ನಿಮ್ಮ ಮನೆಯನ್ನು. ನಿಮ್ಮ ಕಟ್ಟಡದಲ್ಲಿ ತೇವವನ್ನು ತಡೆಗಟ್ಟುವ ಕೆಲವು ಮಾರ್ಗಗಳನ್ನು ನೋಡೋಣ:

1
ಮೆಂಬ್ರೇನ್ ಡ್ಯಾಂಪ್ ಪ್ರೂಫಿಂಗ್
ಇದು ತೇವ-ನಿರೋಧಕ ಪದರವನ್ನು ಒದಗಿಸುತ್ತದೆ ಮತ್ತು ಇದು ಒಂದು ಅಗ್ಗದ ಆಯ್ಕೆಯಾಗಿದೆ. ಇದನ್ನು ಬಳಸುವುದು ನಿಜಕ್ಕೂ ಸುಲಭ.
2
ಸರ್ಫೇಸ್‌ ಟ್ರೀಟ್‌ಮೆಂಟ್
ಜಲ-ನಿವಾರಕ ವಸ್ತುಗಳನ್ನು ಹೊಂದಿರುವ ಈ ದ್ರಾವಣವನ್ನು ಉಪಯೋಗಿಸುವುದರಿಂದ ಬಾಹ್ಯ ಮೇಲ್ಮೈಗಳಿಗೆ ಟ್ರೀಟ್‌ಮೆಂಟ್‌ ನೀಡಿದಂತಾಗುತ್ತದೆ
3
ಟೊಳ್ಳು ಗೋಡೆಯ ನಿರ್ಮಾಣ
ಅಂದರೆ ನಿಮ್ಮ ಮನೆಯ ಒಳಗಡೆ ತೇವ ಜಿನುಗುವುದನ್ನು ತಪ್ಪಿಸಲು ನೀವು ಟೊಳ್ಳನ್ನು ನಿರ್ಮಿಸುತ್ತೀರಿ. ಹೆಚ್ಚುವರಿ ಹೊರಗಿನ ಗೋಡೆಯನ್ನು ನಿರ್ಮಿಸುವ ಮೂಲಕ ಇದನ್ನು ಮಾಡಲಾಗುತ್ತದೆ.

ಜಲನಿರೋಧಕ ಪ್ರಕ್ರಿಯೆಯು
ಒಳಗೊಂಡಿರುವ ಹಂತಗಳು

1
ನೀವು ಜಲನಿರೋಧಕ ವಸ್ತುವನ್ನು ಆಯ್ಕೆ ಮಾಡಿದ ನಂತರ, ನಿಮ್ಮ ಮನೆಯ ಗೋಡೆಗಳನ್ನು ನಯವಾಗಿಸಲು ಗ್ರೈಂಡಿಂಗ್ ಮಾಡಬೇಕಾಗುತ್ತದೆ
2
ಜಲನಿರೋಧಕ ತಡೆಗೋಡೆಯಲ್ಲಿ ಯಾವುದೇ ಖಾಲಿ ಜಾಗಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕಂಡುಬರುವ ಯಾವುದೇ ಬಿರುಕುಗಳನ್ನು ಕಾಂಕ್ರೀಟ್ ಪ್ಯಾಚ್‌ಗಳಿಂದ ತುಂಬಿಸಬೇಕಾಗುತ್ತದೆ.
3
ಗೋಡೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು, ಇದರಿಂದಾಗಿ ಜಲನಿರೋಧಕ ವಸ್ತುವು ಕಾಂಕ್ರೀಟ್‌ನೊಂದಿಗೆ ಚೆನ್ನಾಗಿ ಅಂಟಿಕೊಳ್ಳುತ್ತದೆ
4
ಜಲನಿರೋಧಕ ವಸ್ತುವಿನ ಮಿಶ್ರಣವನ್ನು ಗೋಡೆಗಳ ಮೇಲೆ ಹಚ್ಚಬೇಕು

ಜಲನಿರೋಧಕವನ್ನು ಬಳಸುವುದರಿಂದ ದೊರಕುವ ಲಾಭಗಳು ಯಾವುವು?

ಜಲನಿರೋಧಕವು ಗೋಡೆಗಳಲ್ಲಿ ತುಕ್ಕು ಮತ್ತು ಕಿಲುಬನ್ನು ತಡೆಯುವ ಮೂಲಕ ನಿಮ್ಮ ರಚನೆಯ ಬಾಳಿಕೆಯನ್ನು ಹೆಚ್ಚಿಸುತ್ತದೆ. ಇದು ಅಲರ್ಜಿ ಅಥವಾ ಆಸ್ತಮಾ ಪ್ರಚೋದಕಗಳನ್ನು ಉಂಟುಮಾಡುವ ಶಿಲೀಂಧ್ರಗಳ ಬೆಳವಣಿಗೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಜೊತೆಗೆ, ಇದು ನೀರಿನಿಂದ ಉಂಟಾಗುವ ಹಾನಿಯಿಂದಾಗಿ ಉತ್ಪನ್ನವಾಗಬಹುದಾದ ವಿಪರೀತವಾದ ರಿಪೇರಿಗಳನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಆಸ್ತಿಯ ಮೌಲ್ಯವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಮನೆ ನಿರ್ಮಾಣದ ಕುರಿತಾಗಿ ಆ ರೀತಿಯ ಹೆಚ್ಚಿನ ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್ ರವರ  #ಮನೆಯ ಬಗ್ಗೆಮಾತನಾಡೋಣ ಅಲ್ಟ್ರಾಟೆಕ್ ಸಿಮೆಂಟ್ ಮೂಲಕ                                                                                     

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ