ಮನೆ ಕನ್‌ಸ್ಟ್ರಕ್ಷನ್‌ಗಾಗಿ ವೆಚ್ಚವನ್ನು ಅಂದಾಜು ಮಾಡಲು ತ್ವರಿತ ಮಾರ್ಗದರ್ಶಿ

25 ನೇ ಮಾರ್ಚ್, 2019

ನಿಮ್ಮ ಸ್ವಂತ ಮನೆಯನ್ನು ನಿರ್ಮಿಸಲು, ಹಣಕಾಸಿನ ಬಗ್ಗೆ ಯೋಜನೆ ಹಾಕುವುದು ಅತ್ಯಂತ ಮುಖ್ಯವಾಗಿರುತ್ತದೆ. ಹಣಕಾಸಿನ ತೊಂದರೆಯಿಂದಾಗಿ, ನಿಮ್ಮ ಮನೆಯನ್ನು ಅಪೂರ್ಣವಾಗಿರುವ ಪರಿಸ್ಥಿತಿಯಲ್ಲಿ ನೋಡಲು ನೀವು ಬಯಸುವುದಿಲ್ಲ.

ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುವ ಹಲವು ಅಸ್ಥಿರಪಡಿಸಬಹುದಾದ ಅಂಶಗಳಿವೆ. ಆದ್ದರಿಂದ ನೆರೆಹೊರೆಯವರು, ಸಂಬಂಧಿಕರು, ಸ್ನೇಹಿತರೊಂದಿಗೆ ಚರ್ಚಿಸುವುದು ಮತ್ತು ಅವರ ಆರಂಭಿಕ ಬಜೆಟ್‌ಗಿಂತ ಅವರು ಎಷ್ಟು ಹೆಚ್ಚು ಖರ್ಚನ್ನು ಮಾಡಿದ್ದಾರೆ ಮತ್ತು ಏಕೆ ಎನ್ನುವುದನ್ನು ಕಂಡುಹಿಡಿಯುವುದು ಒಂದು ಸರಿಯಾದ ವಿಧಾನವಾಗಿದೆ.

ನೀವು ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು, ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳಿಗಾಗಿ ಹಣವನ್ನು ಮೀಸಲಿಡಲು ಖಚಿತಪಡಿಸಿಕೊಳ್ಳಿ.

ನಿಮ್ಮ ಕಟ್ಟಡದ ನಕಾಶೆಯ ಬಗ್ಗೆ ನಿಮ್ಮ ಗುತ್ತಿಗೆದಾರರೊಂದಿಗೆ ಚರ್ಚಿಸಿ. ಇದು ನಿಮಗೆ ಕಾರ್ಮಿಕ, ನಿರ್ಮಾಣ ಸಾಮಗ್ರಿಗಳು ಮತ್ತು ಗುತ್ತಿಗೆದಾರರ ವೆಚ್ಚಗಳ ಬಗ್ಗೆ ಕಲ್ಪನೆಯನ್ನು ನೀಡುತ್ತದೆ ಹಾಗೂ ನಿಮ್ಮ ಖರ್ಚಿಗೆ ಸಂಬಂಧಿಸಿದಂತೆ ನಿಮ್ಮ ಮನೆಯ ವೆಚ್ಚಗಳನ್ನು ಸರಿಹೊಂದಿಸಲು ಅನುವು ಮಾಡಿಕೊಡುತ್ತದೆ.

ನೀವು ಯಾವುದೇ ಸಂಖ್ಯೆಯನ್ನು ಅಂತಿಮವೆಂದು ಪರಿಗಣಿಸುವ ಮೊದಲು, ಒಳಾಂಗಣಗಳ ವೆಚ್ಚದ ಬಗ್ಗೆ ಮರೆಯಬೇಡಿ. ಕೊಳಾಯಿ, ಟೈಲಿಂಗ್, ಪೈಂಟಿಂಗ್, ಫ್ಲೋರಿಂಗ್‌ ಮತ್ತು ಪೀಠೋಪಕರಣಗಳ ವೆಚ್ಚವನ್ನು ನಿಮ್ಮ ಅಂದಾಜಿನಲ್ಲಿ ಸೇರಿಸುವ ಅಗತ್ಯವಿದೆ.

ಅಂತಿಮವಾಗಿ, ನೀವು ಊಹಿಸಲಾಗದ ಖರ್ಚುಗಳಿಗಾಗಿ ತುರ್ತು ನಿಧಿಯನ್ನು ಕಾದಿರಿಸಿ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ