ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ

ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು 6 ವಿಧಾನಗಳು

ವಾಸ್ತು ಶಾಸ್ತ್ರ ಎನ್ನುವುದು ಸಂಸ್ಕೃತ ಪದವಾಗಿದ್ದು 'ನಿರ್ಮಾಣದ ವಿಜ್ಞಾನವನ್ನು' ಉಲ್ಲೇಖಿಸುತ್ತದೆ. ಇದು ಸ್ಥಳ, ಹೊಂದಿಸುವಿಕೆ, ರೂಪುರೇಷೆ, ಅಳತೆ ಮುಂತಾದ ಎಲ್ಲ ವಿಧದ ವಾಸ್ತು ಮತ್ತು ವಿನ್ಯಾಸದ ವಿಚಾರಗಳನ್ನು ಒಳಗೊಂಡಿದೆ. ಸಕಾರಾತ್ಮಕ ಶಕ್ತಿಯನ್ನು ತರಲು ಮನೆಯ ವಾಸ್ತು ಗಮನಾರ್ಹ ಪಾತ್ರ ವಹಿಸುತ್ತದೆ.


ವಾಸ್ತು ತಜ್ಞರ ಪ್ರಕಾರ ಪೂಜಾ ಕೋಣೆಯ ವಾಸ್ತು

ಪೂಜಾ ಕೋಣೆಗೆ ವಾಸ್ತು ಇನ್ನೂ ಮುಖ್ಯವಾಗಿದೆ ಏಕೆಂದರೆ ಇದು ಇಡೀ ಮನೆಯ ತೇಜಸ್ಸು ಮತ್ತು ವಾಸ್ತುವನ್ನು ನಿರ್ಧರಿಸುತ್ತದೆ. ಮನೆಯ ಸಕಾರಾತ್ಮಕ ಶಕ್ತಿ ಮತ್ತು ಕಂಪನಗಳಿಗೆ ಪೂಜಾ ಕೋಣೆ ಕೇಂದ್ರಸ್ಥಾನವಾಗಿರುತ್ತದೆ ಎಂದು ವಾಸ್ತುತಜ್ಞರು ಅಭಿಪ್ರಾಯಪಡುತ್ತಾರೆ ಮತ್ತು ಈ ಕಾರಣದಿಂದಾಗಿ ನಿಮ್ಮ ಮನೆ ನಿರ್ಮಾಣ ಮಾಡುವಾಗ ಪೂಜಾ ಕೋಣೆಗೆ ವಾಸ್ತುವನ್ನು ಅತ್ಯಂತ ಪ್ರಮುಖವಾಗಿ ಗಮನದಲ್ಲಿ ಇರಿಸಿಕೊಳ್ಳಬೇಕು.
 

ಪೂಜಾ ಕೋಣೆಗೆ ವಾಸ್ತುವಿನ ಪ್ರಾಮುಖ್ಯತೆ 

ಪೂಜಾ ಕೋಣೆಯು ಮನೆಯ ಸಕಾರಾತ್ಮಕ ಮತ್ತು ಪ್ರಶಾಂತತೆಯ ಕೇಂದ್ರವಾಗಿ ವರ್ತಿಸುತ್ತದೆ, ಏಕೆಂದರೆ ನಿಮ್ಮ ಮನೆಯಲ್ಲಿ ದೇವರ ಉಪಸ್ಥಿತಿಯಿಂದಾಗಿ ದೈವೀಕ ಶಕ್ತಿಯನ್ನು ಹೊರಹೊಮ್ಮಿಸುತ್ತದೆ. ದೇವರಿಗಾಗಿ, ಅಂದರೆ ಪೂಜಾ ಕೋಣೆಗಾಗಿ ಪ್ರತ್ಯೇಕ ಸ್ಥಳವನ್ನು ನಿಯೋಜಿಸುವುದು, ಅದು ಎಷ್ಟೇ ದೊಡ್ಡದಾಗಿರಲಿ ಅಥವಾ ಸಣ್ಣದಾಗಿರಲಿ ಅತ್ಯಂತ ಮುಖ್ಯವಾಗಿದೆ ಮತ್ತು ಶಾಂತ, ಸಕಾರಾತ್ಮಕ ಶಕ್ತಿಯನ್ನು ತರಲು ಮತ್ತು ನಿಮ್ಮ ಮನೆಯಲ್ಲಿ ಯಾವ ರೀತಿಯ ಶಕ್ತಿ ಹೊರಹೊಮ್ಮುತ್ತದೆ ಎನ್ನುವುದನ್ನು ನಿರ್ಧರಿಸಲು ಸರಿಯಾದ ವಾಸ್ತು ಗಮನಾರ್ಹ ಪಾತ್ರ ವಹಿಸುತ್ತದೆ.

ಪೂಜಾ ಕೋಣೆ ಮನೆಯಲ್ಲಿ ಒಳ್ಳೆಯ ಅಲೆಗಳನ್ನು ಸೃಷ್ಟಿಸುವುದಷ್ಟೇ ಅಲ್ಲ, ನಿಮ್ಮನ್ನು ದೈವೀಕ ಶಕ್ತಿಗಳಿಗೆ ಸಂಪರ್ಕಿಸಲು ಸಹ ನೆರವಾಗುತ್ತದೆ. ನಕಾರಾತ್ಮಕ ಶಕ್ತಿಯನ್ನು ನಿವಾರಿಸಲು ಮತ್ತು ನಿಮ್ಮ ಮನೆಯನ್ನು ಸಕಾರಾತ್ಮಕ ಶಕ್ತಿಯಿಂದ ತುಂಬಿಸಲು ವಾಸ್ತು ಪರಿಪೂರ್ಣವಾಗಿರಬೇಕು.

ಪೂಜಾ ಕೋಣೆಗಾಗಿ ವಾಸ್ತು ಸಲಹೆಗಳು

ವಾಸ್ತುಶಾಸ್ತ್ರದ ಸಿದ್ಧಾಂತಗಳ ಅನುಸಾರ ಪೂಜಾ ಕೋಣೆಗಾಗಿ ಸರಿಯಾದ ವಾಸ್ತುವಿನೊಂದಿಗೆ ನಿಮ್ಮ ಮನೆಯನ್ನು ಸಕಾರಾತ್ಮಕ ಮತ್ತು ದೈವೀಕ ಶಕ್ತಿಯ ನೆಲೆಯನ್ನಾಗಿ ಮಾಡಲು ಇಲ್ಲಿ ಕೆಲವು ಸಲಹೆಗಳಿವೆ :

 • 1. ಪೂಜಾ ಕೋಣೆಯ ಸ್ಥಾನ :

 • ಪೂಜಾ ಕೋಣೆಗಾಗಿನ ವಾಸ್ತು ಪ್ರಕಾರ ಪೂಜಾ ಕೋಣೆಯ ಸ್ಥಾನಕ್ಕಾಗಿ ಸಲಹೆ ನೀಡಿರುವ ಪ್ರತಿ ದಿಕ್ಕು ಕೂಡ ಮಹತ್ವವಾಗಿದೆ ಮತ್ತು ವಿಶೇಷವಾದ ಸಂಗತಿಯನ್ನು ಪ್ರತಿನಿಧಿಸುತ್ತದೆ, ಆದಕಾರಣ ಪೂಜಾ ಕೋಣೆಯ ವಾಸ್ತುವಿನಲ್ಲಿ ಅದರ ಸ್ಥಾನ ಅತ್ಯಂತ ಮುಖ್ಯವಾದುದಾಗಿದೆ.

  • ಈಶಾನ್ಯ ಮೂಲೆಯನ್ನು ಪೂಜಾ ಕೋಣೆಗೆ ಅತ್ಯಂತ ಪ್ರಶಸ್ತ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಭಗವಾನ್ ಶಿವನ ಸ್ಥಳವಾಗಿದೆ ಮತ್ತು ಅತ್ಯಂತ ಮಂಗಳಕರವಾಗಿದೆ. ಇದಾದ ಬಳಿಕ ಪೂರ್ವ ಅಥವಾ ಉತ್ತರವನ್ನು ಪರಿಗಣಿಸಲಾಗುತ್ತದೆ. ದಕ್ಷಿಣಕ್ಕೆ ಮುಖಮಾಡಿರುವ ಪೂಜಾ ಕೋಣೆಯನ್ನು ಅಮಂಗಳಕರ ಎಂದು ಪರಿಗಣಿಸಲಾಗಿದೆ.
  • ನಿಮ್ಮ ಪೂಜಾ ಕೋಣೆಯನ್ನು ಮೆಟ್ಟಿಲುಗಳ ಕೆಳಗೆ ಅಥವಾ ಶೌಚಕೋಣೆಯ ಸಮೀಪ ನಿರ್ಮಿಸಬೇಡಿ ಏಕೆಂದರೆ ಇವುಗಳು ಪೂಜಾ ಕೋಣೆಗೆ ಅಮಂಗಳಕರವಾಗಿವೆ.
  • ಪೂಜಾ ಕೋಣೆಯನ್ನು ನೆಲಮಹಡಿ ಅಥವಾ ಮೇಲ್ಮಹಡಿಯಲ್ಲಿ ನಿರ್ಮಿಸಬೇಡಿ ಏಕೆಂದರೆ ವಾಸ್ತು ಪ್ರಕಾರ ಪೂಜಾ ಕೋಣೆಗೆ ಇವು ಅತ್ಯುತ್ತಮ ಸ್ಥಳಗಳಲ್ಲ.
  • ಪೂಜಾ ಕೋಣೆಯ ಬಾಗಿಲು ಮತ್ತು ಕಿಟಕಿಗಳು ಉತ್ತರ ಅಥವಾ ಪೂರ್ವಕ್ಕೆ ತೆರೆಯಬೇಕು.
  • ವಾಸ್ತು ಪ್ರಕಾರ ಪೂಜಾ ಕೋಣೆಯಲ್ಲಿ ಸಕಾರಾತ್ಮಕ ಕಂಪನಗಳಿಗಾಗಿ ಪಿರಮಿಡ್ ಆಕೃತಿಯ ಛಾವಣಿಯನ್ನು ಶಿಫಾರಸು ಮಾಡಲಾಗಿದೆ.
  • ಪೂರ್ವಾಭಿಮುಖವಾಗಿರುವ ಮನೆಗಳಿಗೆ ಪೂಜಾ ಕೋಣೆಯ ವಾಸ್ತು ಪ್ರಕಾರ ಪೂಜಾ ಕೋಣೆಯು ಒಂದೋ ಉತ್ತರ ಅಥವಾ ಪೂರ್ವದ ಮೂಲೆಯಲ್ಲಿ ಇರಬೇಕು.
Pooja room direction according to Vastu Shastra
 • 2. ದೇವರ ವಿಗ್ರಹಗಳ ಸ್ಥಾಪನೆ :

  • ವಾಸ್ತು ಪ್ರಕಾರ, ಪೂಜಾ ಕೋಣೆಯಲ್ಲಿನ ವಿಗ್ರಹಗಳು ಪರಸ್ಪರ ಎದುರುಬದುರಾಗಿರಬಾರದು ಮತ್ತು ಗೋಡೆಗೆ ಸಮೀಪ ಇರಬಾರದು.
  • ವಿಗ್ರಹವನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು.
  • ಎಲ್ಲ ವಿಗ್ರಹಗಳು ಒಂದು ದಿಕ್ಕಿನತ್ತ ಇವೆ ಮತ್ತು ಬಾಗಿಲಿಗೆ ಮುಖ ಮಾಡಿಲ್ಲ ಎಂದು ಖಚಿತಪಡಿಸಿಕೊಳ್ಳಿ.
  • ವಿಗ್ರಹಗಳ ಸುತ್ತ ಸಾಕಷ್ಟು ಗಾಳಿಯ ಹರಿವನ್ನು ಖಚಿತಪಡಿಸಲು ವಿಗ್ರಹಗಳನ್ನು ಗೋಡೆಯ ಮೇಲೆ ತೂಗುಹಾಕಬಾರದು.
  • ಪೂಜಾ ಕೋಣೆಯ ವಾಸ್ತು ಶಾಸ್ತ್ರದ ಶಿಫಾರಸಿನ ಪ್ರಕಾರ ವಿಗ್ರಹಗಳನ್ನು ನೆಲದಿಂದ ಕನಿಷ್ಟ 6 ಇಂಚುಗಳ ಎತ್ತರದಲ್ಲಿ ಇರಿಸಬೇಕು.
  • ಕೋಣೆಯಲ್ಲಿ ಸತ್ತವರ ಅಥವಾ ಹಿಂಸೆಯನ್ನು ಪ್ರದರ್ಶಿಸುವ ಚಿತ್ರಗಳನ್ನು ಇರಿಸಬೇಡಿ.
  • ವಿಗ್ರಹಗಳು ಭಂಗಗೊಂಡಿಲ್ಲ ಅಥವಾ ಮುರಿದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
  • ದೀಪಗಳನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಬೇಕು.
Vastu Shastra Tips for Puja Room
 • 3. ಪವಿತ್ರ ವಸ್ತುಗಳನ್ನು ಇರಿಸುವಿಕೆ :

  • ಪವಿತ್ರ ವಸ್ತುಗಳು ಮತ್ತು ಇತರ ಪೂಜಾ ಕೋಣೆಯ ವಸ್ತುಗಳನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ಪೂಜಾ ಕೋಣೆಯಲ್ಲಿ ಸಂಗ್ರಹಣೆ ಮಾಡಬೇಡಿ. ಕೋಣೆಯು ಗೊಂದಲಮುಕ್ತವಾಗಿರಬೇಕು.
  • ವಿಗ್ರಹಗಳ ಮೇಲೆ ಯಾವುದೇ ವಸ್ತುವನ್ನು ಎಂದಿಗೂ ಇರಿಸಬಾರದು.
  • ದೀಪ ಅಥವಾ ಅಗ್ನಿಕುಂಡವನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಬೇಕು.
 • 4. ಪೂಜಾ ಕೋಣೆಯಲ್ಲಿ ಕ್ಯಾಬಿನೆಟ್‌ಗಳ ಸ್ಥಾನ :

  • ಪೂಜಾ ಕೋಣೆಯ ವಾಸ್ತು ಪ್ರಕಾರ, ಸೂರ್ಯನ ಬೆಳಕಿಗೆ ಯಾವುದೇ ಅಡಚಣೆಯಾಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳುವ ಸಲುವಾಗಿ ಪೂಜಾ ಕೋಣೆಯಲ್ಲಿ ಯಾವುದೇ ಕ್ಯಾಬಿನೆಟ್‌ಗಳನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಬೇಕು.
  • ಪಿರಮಿಡ್ ಆಕಾರದ ಟವರ್ ಅಥವಾ ಕ್ಯಾಬಿನೆಟ್‌ಗಳು ಸಕಾರಾತ್ಮಕ ಕಂಪನಗಳನ್ನು ಬಿಡುಗಡೆ ಮಾಡುವುದರಿಂದ ಸಂಗ್ರಹಣೆಗಾಗಿ ನೀವು ಅವುಗಳನ್ನು ನಿರ್ಮಿಸಬಹುದು.
  • ವಾಸ್ತು ಪ್ರಕಾರ, ಪೂಜಾ ಕೋಣೆಯಲ್ಲಿ ವಿಗ್ರಹಗಳ ಮೇಲೆ ಕ್ಯಾಬಿನೆಟ್‌ಗಳು ಇರಬಾರದು.
 • 5. ಪೂಜಾ ಕೋಣೆಯ ಬಣ್ಣ :

  • ತಿಳಿ ಬಣ್ಣಗಳು ಸಕಾರಾತ್ಮಕ ಕಂಪನಗಳನ್ನು ಬಿಡುಗಡೆ ಮಾಡುವುದರಿಂದ ಅವು ಸೂಕ್ತವಾಗಿರುತ್ತವೆ ಮತ್ತು ಪೂಜೆ ಹಾಗೂ ಪ್ರಾರ್ಥನೆಗೆ ಆದರ್ಶಪ್ರಾಯವಾಗಿವೆ.
  • ಕ್ರೀಮ್ ಬಣ್ಣವು ಪೂಜಾ ಕೋಣೆಗೆ ಆದರ್ಶವಾಗಿದೆ.
  • ತಿಳಿ ನೀಲಿ, ಬಿಳಿ ಮತ್ತು ತಿಳಿ ಹಳದಿಯಂತಹ ಬಣ್ಣಗಳು ಶಾಂತ ಮತ್ತು ಧ್ಯಾನದ ವಾತಾವರಣವನ್ನು ನಿರ್ಮಿಸುತ್ತವೆ.
  • ಈಶಾನ್ಯ ದಿಕ್ಕಿನಲ್ಲಿರುವ ಪೂಜಾ ಕೋಣೆಗೆ ಬಿಳಿ ಬಣ್ಣವು ಆದರ್ಶವಾಗಿದೆ.
 • 6. ಪೂಜಾ ಕೋಣೆಯಲ್ಲಿ ಬೆಳಕು :

  • ಹಗಲಿನಲ್ಲಿ ಚೆನ್ನಾಗಿ ಬೆಳಕು ಕಾಣಿಸುವ ಸಲುವಾಗಿ ಪೂಜಾ ಕೋಣೆಯಲ್ಲಿ ಕನಿಷ್ಟ ಒಂದು ಕಿಟಕಿ ಇರುವುದು ಅವಶ್ಯಕವಾಗಿದೆ. ಇದು ಸೂರ್ಯನಿಂದ ಸಕಾರಾತ್ಮಕ ಶಕ್ತಿ ಮತ್ತು ಕಂಪನಗಳನ್ನು ಮುಕ್ತವಾಗಿ ಹರಿಯುವಂತೆಯೂ ಮಾಡುತ್ತದೆ ಎಂದು ಪೂಜಾ ಕೋಣೆಯ ವಾಸ್ತುಶಾಸ್ತ್ರವು ಹೇಳುತ್ತದೆ.
  • ಪ್ರತಿ ಸೂರ್ಯಾಸ್ತದ ಬಳಿಕ ಕೋಣೆಯಲ್ಲಿ ಚೆನ್ನಾಗಿ ಬೆಳಕಿರುವಂತೆ ನೋಡಿಕೊಳ್ಳಿ. ಪೂಜಾ ಕೋಣೆಯಲ್ಲಿ ದೀಪ ಇರಿಸಿ ಅಥವಾ ಸಾಕಷ್ಟು ಪ್ರಕಾಶ ಇರುವ ದೀಪ ಇರುವುದನ್ನು ಖಚಿತಪಡಿಸಿಕೊಳ್ಳಿ.

ವಾಸ್ತು ಪ್ರಕಾರ ನಿರ್ಮಿಸಿದ ಪೂಜಾ ಕೋಣೆಯು ಪವಿತ್ರವಾಗಿರುವುದಷ್ಟೇ ಅಲ್ಲ ಮನೆಯಲ್ಲಿ ಸಂತೋಷ ನೆಲೆಸುವಂತೆಯೂ ಮಾಡುತ್ತದೆ. ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಪವಿತ್ರ ಹಾಗೂ ಸಂತೋಷದಾಯಕ ಮನೆಯಲ್ಲಿ ನಕಾರಾತ್ಮಕ ಶಕ್ತಿಗೆ ಜಾಗವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ವಾಸ್ತು ಸಲಹೆಗಳನ್ನು ಅನುಸರಿಸಿ.

ನಿಮ್ಮ ಮನೆಯ ಮುಖ್ಯ ಬಾಗಿಲನ್ನು ಸರಿಯಾದ ಸ್ಥಳದಲ್ಲಿ ಇರಿಸುವ ಮೂಲಕ ನಿಮ್ಮ ಮನೆ ಪ್ರವೇಶಿಸುವ ಶಕ್ತಿಯನ್ನು ನಿಯಂತ್ರಿಸಿ ಮತ್ತು ನಕಾರಾತ್ಮಕ ಶಕ್ತಿಯಿಂದ ನಿಮ್ಮ ಮನೆಯನ್ನು ರಕ್ಷಿಸಿ.