ನಿಮ್ಮ ಮನೆಯ ನಿರ್ಮಾಣ ತಾಣಕ್ಕೆ ಬೇಕಾದ 5 ಪ್ರಮುಖ ಸುರಕ್ಷಿತ ಕ್ರಮಗಳು

ನಿಮ್ಮ ಮನೆಯ ನಿರ್ಮಾಣದ ಕಾಮಗಾರಿಯ ವಿಷಯಕ್ಕೆ ಬಂದಲ್ಲಿ, ಯೋಜನೆಯ ಸಮಯದಿಂದ ಹಿಡಿದು ಅದನ್ನು ಮುಗಿಸುವವರೆಗಿನ ಬಗ್ಗೆ ಸಾಕಷ್ಟು ಯೋಚಿಸಬೇಕಾಗುತ್ತದೆ. ಆದರೆ ನೀವು ನಿರ್ಮಾಣದ ಕಾಮಗಾರಿಯ ಪ್ರಕ್ರಿಯೆಯಲ್ಲಿ ಸಾಗುತ್ತಿರುವಾಗ, ಸುರಕ್ಷತೆಯು ನೀವು ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಾಗದಂತಹ ಒಂದು ವಿಷಯವಾಗಿರುತ್ತದೆ. ಅದು ಕಟ್ಟಡದ ಸುರಕ್ಷತೆ ಆಗಿರಬಹುದು, ನಿರ್ಮಾಣ ತಂಡವಾಗಿರಬಹುದು, ಮೇಲ್ವಿಚಾರಕರು ಆಗಿರಬಹುದು ಅಥವಾ ನಿವೇಶನದಲ್ಲಿರುವ ಯಾರಾದರೂ ಆಗಿರಬಹುದು. ನಿರ್ಮಾಣ ತಾಣವು ಸ್ವತಃ ಹೆಚ್ಚಿನ ಅಪಾಯವುಳ್ಳ ವಾತಾವರಣವನ್ನು ಹೊಂದಿದ್ದು, ಅಲ್ಲಿ ಕಾರ್ಮಿಕರು ವಿದ್ಯುತ್ ಅಪಾಯಗಳು, ನಿರ್ಮಾಣ ಯಂತ್ರೋಪಕರಣಗಳ ಅಪಾಯಗಳು ಮತ್ತು ಇತರ ಯಾವುದೇ ಅಪಘಾತಗಳಿಗೆ ಒಳಗಾಗುವ ಸಂಭವವಿರುತ್ತದೆ. ಅದಕ್ಕಾಗಿಯೇ, ನಿಮ್ಮ ಮನೆಯ ನಿರ್ಮಾಣದ ಕಾಮಗಾರಿಯ ಸಮಯದಲ್ಲಿ ಯಾವುದೇ ಅಪಘಾತಗಳನ್ನು ತಡೆಗಟ್ಟಲು ಕಾರ್ಯಕ್ಷೇತ್ರವು ಸುರಕ್ಷಿತ ಮತ್ತು ಸುಭದ್ರವಾಗಿದೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ನಿಮ್ಮ ಮನೆಯ ನಿರ್ಮಾಣ ಸ್ಥಳದಲ್ಲಿ ಪಾಲಿಸಬಹುದಾದ ಕೆಲವು ಸುರಕ್ಷತಾ ಕ್ರಮಗಳು ಇಲ್ಲಿವೆ

ವೈಯಕ್ತಿಕ ರಕ್ಷಣಾ ಸಾಧನದ
ಬಳಕೆಯನ್ನು ಖಚಿತಪಡಿಸಿಕೊಳ್ಳಿ

ವೈಯಕ್ತಿಕ ರಕ್ಷಣಾ ಸಾಧನದ
ಬಳಕೆಯನ್ನು ಖಚಿತಪಡಿಸಿಕೊಳ್ಳಿ

ಇದು ಯಾವುದೇ ನಿರ್ಮಾಣ ಸ್ಥಳದಲ್ಲಿನ ಕಾರ್ಮಿಕರು, ಮೇಲ್ವಿಚಾರಕರು ಮತ್ತು ಸ್ವತಃ ನಿಮಗಾಗಿನ ಪ್ರಮುಖ ಕ್ರಮಗಳಲ್ಲಿ ಒಂದಾಗಿರುತ್ತದೆ. ಕೆಲಸದ ಮಾದರಿಯನ್ನು ಅವಲಂಬಿಸಿ ಕಾರ್ಮಿಕರಿಗೆ ಸುರಕ್ಷತಾ ಸರಂಜಾಮು, ಸುರಕ್ಷತಾ ಕನ್ನಡಕಗಳು, ತಲೆ ರಕ್ಷಣಾ ಕವಚ ಮತ್ತು ಬೀಳುವ ಸಮಯದಲ್ಲಿ ರಕ್ಷಣೆ ನೀಡುವಂತಹ ಸರಿಯಾದ ಸುರಕ್ಷತಾ ಸಾಧನಗಳು ಬೇಕಾಗುತ್ತವೆ

1

ವಿದ್ಯುತ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ

ನಿರ್ಮಾಣ ಸ್ಥಳಗಳಲ್ಲಿನ ಸಾವುನೋವುಗಳಿಗೆ ಪ್ರಮುಖ ಕಾರಣವೆಂದರೆ ವಿದ್ಯುತ್ ಅಪಘಾತಗಳು. ಹೆಚ್ಚಿನ ಶಕ್ತಿಯನ್ನು ಹೊಂದಿದ ಉಪಕರಣಗಳು, ಜನರೇಟರ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಉದ್ದವಾದ ಕೇಬಲ್‌ಗಳ ಬಳಕೆಯು ಅಪಾಯಕಾರಿಯಾಗಿದ್ದು ಹಾಗೂ ಅಪಘಾತಗಳನ್ನು ತಪ್ಪಿಸಲು ಅವುಗಳನ್ನು ಸರಿಯಾಗಿ ನಿರ್ವಹಿಸುವ ಅಗತ್ಯತೆ ಇರುತ್ತದೆ

2

ನಿರ್ಮಾಣ ಸ್ಥಳದಲ್ಲಿನ ವಿದ್ಯುತ್ ಸುರಕ್ಷತೆಯನ್ನು
ಖಚಿತಪಡಿಸಿಕೊಳ್ಳಲು ಕೆಲವು ಸಲಹೆಗಳು

1

ನೆಲದ ಮೇಲಿನ ಮತ್ತು ನೆಲದಡಿಯ ಪ್ರಸರಣ ಕೇಬಲ್‌ಗಳು ಮತ್ತು ಕೊಳವೆಗಳಿಂದ ಸುರಕ್ಷಿತ ದೂರವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

2

ಎಲ್ಲಾ ವಿದ್ಯುತ್ ಉತ್ಪನ್ನಗಳು ಮತ್ತು ಕೇಬಲ್‌ಗಳನ್ನು ಇನ್‌ಸುಲೇಟ್‌ ಮಾಡಿರಬೇಕು. ಎಲ್ಲೆಡೆಯೂ ತೆರೆದಿರುವ ತಂತಿಗಳು ಬಿದ್ದಿರಬಾರದು.

3

ಪ್ರತಿಯೊಂದು ವಿದ್ಯುತ್ ಸಂಪರ್ಕಗಳನ್ನು ಮೂರು-ಪಾಯಿಂಟ್ ಗ್ರೌಂಡಿಂಗ್ ಪ್ಲಗ್ ಮೂಲಕ ನೆಲಕ್ಕೆ ಸಂಪರ್ಕ ಕಲ್ಪಿಸಿರಬೇಕು.

4

ಏರಿಳಿತಗಳು ಮತ್ತು ಓವರ್‌ಲೋಡ್ ಆಗುವುದನ್ನು ತಪ್ಪಿಸುವ ಸಲುವಾಗಿ ವಿದ್ಯುತ್ ಬಳಕೆಯನ್ನು ನಿಯಂತ್ರಣದಲ್ಲಿ ಇಟ್ಟಿರಬೇಕು, ವಿಶೇಷವಾಗಿ ಅನೇಕ ವಿಸ್ತರಣೆಗಳನ್ನು ಬಳಸುವ ಸಮಯದಲ್ಲಿ

 

ಸುರಕ್ಷಿತ ಮತ್ತು ಭದ್ರತಾ ಶಿಷ್ಟಾಚಾರಗಳನ್ನು ಅಳವಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು

 

ಸುರಕ್ಷಿತ ಮತ್ತು ಭದ್ರತಾ ಶಿಷ್ಟಾಚಾರಗಳನ್ನು ಅಳವಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು

ಕಾರ್ಮಿಕರುಗಳಿಗೆ ಸುರಕ್ಷತೆ ಒದಗಿಸಲು ಹಾಗೂ ಸಾಮಗ್ರಿಗಳು ಮತ್ತು ಯಂತ್ರೋಪಕರಣಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ಪ್ರವೇಶವನ್ನು ಸೀಮಿತಗೊಳಿಸಬೇಕು ಮತ್ತು ಅಧಿಕೃತ ವ್ಯಕ್ತಿಗಳು ಮಾತ್ರ ಒಳಬರಲು ಅವಕಾಶ ನೀಡಬೇಕು. ನಿರ್ಮಾಣ ಸ್ಥಳದಲ್ಲಿ ಸಂಭವಿಸಬಹುದಾದ ಯಾವುದೇ ಅಪಾಯಗಳಿಂದ ನೆರೆಹೊರೆಯವರು ಮತ್ತು ಪಾದಚಾರಿಗಳನ್ನು ರಕ್ಷಿಸುವ ಬಗ್ಗೆ ಗಮನ ಹರಿಸಬೇಕು ಮತ್ತು ಅದಕ್ಕೆ ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು

3

 

ಕಾಮಗಾರಿಗೆ ಬೇಕಾದ ಎಲ್ಲಾ ನಿರ್ಮಾಣ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗಿರುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು

 

ಕಾಮಗಾರಿಗೆ ಬೇಕಾದ ಎಲ್ಲಾ ನಿರ್ಮಾಣ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗಿರುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು

ಬಹುತೇಕ ಸಾಮಗ್ರಿಗಳನ್ನು, ವಿಶೇಷವಾಗಿ ನಿರ್ಮಾಣ ಸ್ಥಳದಲ್ಲಿ ಇರಬಹುದಾದ ರಾಸಾಯನಿಕಗಳು ಮತ್ತು ಯಂತ್ರೋಪಕರಣಗಳನ್ನು ಸುರಕ್ಷಿತವಾಗಿ ಮತ್ತು ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡುವುದನ್ನು ಗಮನದಲ್ಲಿಟ್ಟುಕೊಂಡು ಸಂಗ್ರಹಿಸಬೇಕಾಗುತ್ತದೆ ಹಾಗೂ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಸಾಮಗ್ರಿಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೇ ಇದ್ದಲ್ಲಿ, ಅದರಲ್ಲಿಯೂ ಬೇಗನೆ ಉರಿಯುವ ವಸ್ತುಗಳು ಇದ್ದಲ್ಲಿ, ಬೆಂಕಿ, ಸ್ಫೋಟ ಹಾಗೂ ಗಂಭೀರವಾದ ಗಾಯಗಳಿಗೆ ಕಾರಣವಾಗಬಹುದು

4

 

ಪ್ರತಿಕೂಲ ಪರಿಸರ ಪರಿಸ್ಥಿತಿಯನ್ನು ಎದುರಿಸಲು ಯೋಜನೆ ಮತ್ತು ಸಿದ್ಧತೆಯನ್ನು ಮಾಡಿಕೊಳ್ಳಬೇಕು

 

ಪ್ರತಿಕೂಲ ಪರಿಸರ ಪರಿಸ್ಥಿತಿಯನ್ನು ಎದುರಿಸಲು ಯೋಜನೆ ಮತ್ತು ಸಿದ್ಧತೆಯನ್ನು ಮಾಡಿಕೊಳ್ಳಬೇಕು

ಆದರೆ ಎಲ್ಲವೂ ನಮ್ಮ ಯೋಜನೆಯ ಪ್ರಕಾರವೇ ನಡೆಯುವುದಿಲ್ಲ ಎನ್ನುವುದು ವಾಸ್ತವಾಂಶ. ನಿಮ್ಮ ಪ್ರದೇಶವು ಯಾವ ಜಾಗದಲ್ಲಿ ಇದೆ ಎನ್ನುವುದನ್ನು ಗಣನೆಗೆ ತೆಗೆದುಕೊಂಡು ಅನಿರೀಕ್ಷಿತ ಮಳೆ ಅಥವಾ ಇತರ ಪ್ರತಿಕೂಲ ಪರಿಸರ ಪರಿಸ್ಥಿತಿಗಳಿಗೆ ಸಿದ್ಧರಾಗಿರಬೇಕಾಗುತ್ತದೆ, ಇದರಿಂದ ನಿಮ್ಮ ನಿರ್ಮಾಣದ ಸ್ಥಳದಲ್ಲಿ ಅದು ಯಾವುದೇ ಅಪಘಾತಗಳು ಅಥವಾ ಆಕಸ್ಮಿಕಗಳನ್ನು ಉಂಟುಮಾಡದಿರುವ ರೀತಿ ನೋಡಿಕೊಳ್ಳಬಹುದು.

5

ಕೊನೆಯಲ್ಲಿ ಹೇಳಬೇಕಾದುದು ಇಷ್ಟೇ, ನಿಮ್ಮ ಮನೆಯ ಸುರಕ್ಷತೆಯು ನೀವು ಆಯ್ಕೆ ಮಾಡಿದ ಸುರಕ್ಷಿತ ಸಾಮಗ್ರಿಗಳು ಹಾಗೂ ಸುರಕ್ಷತೆ ಮತ್ತು ಭದ್ರತೆ ಹೊಂದಿದ ನಿರ್ಮಾಣಕ್ಕಾಗಿ ನೀವು ತೆಗೆದುಕೊಳ್ಳುವ ಕ್ರಮಗಳ ಮೇಲೆ ಅವಲಂಬಿತವಾಗಿರುತ್ತದೆ.

ಮನೆಯ ನಿರ್ಮಾಣದ ಕುರಿತಾಗಿ ಇದೇ ರೀತಿಯ ಹೆಚ್ಚಿನ ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್‌ರವರ #ಬಾತ್ಘರ್ಕಿ ಅಲ್ಟ್ರಾಟೆಕ್ ಸಿಮೆಂಟ್

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ